Wednesday, April 21, 2010

ಮಂಜುಳಾ


"ಪ್ರೀತಿಯ ಪಾರಿವಾಳ ಹಾರಿ ಹೋತೋ ಗೆಳೆಯ.. ಮನಸಿಗೆ ತಳಮಳ ಮಾಡಿ ಹೂತೋ ಗೆಳೆಯ" ಆ ಪಾರಿ(ವಾಳ)ಗೆ ಗೊತ್ತು ನಾನು ನೀನು ಎಷ್ಟ ಪ್ರೀತಿ ಮಾಡ್ತಿದ್ದೀವೆಂತ. ಈಗ ಯಾರಿಗೆ ಹೇಳಿ ಏನ್ ಪ್ರಯೋಜನ? ಎಲ್ಲಾ ಮುಗದ ಹೋಗೇತಿ. ನನಗೊಂದ ಆತು, ನಿನಗ ಯಾಡ್ ಆದೂ (ಮಕ್ಕಳು). ಏನಂದರ ನೀ ಸುಖದಿಂದ ಅದಿ. ನಾ ಇಲ್ಲ ಅಷ್ಟ ಡಿಫರನ್ಸ್.



ಅಗಡಿ ಶೋಭಿ



"ಕೊನೆಗೂ ಕೊಟ್ಟ ಹೋದ್ಯಾ ಕೈಯಿ .... ನಿನ್ನ ನೆನಪಿಗಂತ ಕೈಯಾಗ ಕೊಟ್ಟ ಹೋದ್ಯಾ ಶರೆದ ಬಾಟಲಿ"................

ಶೋಭಿ ನನಗ ನಿನ್ನ ನೆನಪ ಆದಾಗೆಲ್ಲ ಈ ಹಾಡ ನೆನಪಿಗೆ ಬರತೈತಿ. ಅಲ್ಲಲೇ....... ಪ್ರೀತಿ ಮಾಡುವಂಗ ಮಾಡೇ ನಮ್ಮಅಂತಾ ಮುಗ್ದ ಹುಡುಗೂರನ್ನ್ ಹಳ್ಳ ಹಿಡಿಸಿ, ಕಡೆಕ್ ಇನ್ನೊಬ್ಬಗ ಕೊಳ್ಳ ಕೊಟ್ಟ ಗುಳದಾಳಿ ಕಟ್ಟಸಗೊಂಡ, ಅವನ ಹಿಂಬಾಲಿ ಹೋಗಿಬಿಡ್ತಿರಿ. ನಿಮ್ಮಅಂತವರೆಲ್ಲ ಹಿಂಗ್ ಮಾಡಿ ಹೂಕ್ಕಿರಿ. ನಾವ್ ಮಾಡ್ಕೊಂಡ್ ಹೆಣ್ಣಗೋಳು ನಮಗ ಹಿಂಗ್ ಮಾಡ್ತಾವ್ ನಾವ್ ಬದುಕೂದ್ ಹೆಂಗ್ ಹಿಂಗಾದರ

Saturday, April 17, 2010

ಉಪ್ಪಿನ ಮಹಾದೇವಿ

ನಿಯೇನ ಉಪ್ಪ ಮಾರಾಕೆನ ............. ? ಅಲ್ಲಾ ಉಪ್ಪಿನ್ ಮಾದೇವಿ ಅಂತ್ ಹೆಸರ ಇಟಗೊಂಡಿಯಲ್ಲ ಅದಕ್ ಕೇಳಿನಿ

ನಿನ್ನನ್ನು ಮರೆತು ಬಾಳುವುದಕ್ಕಾಗುತ್ತಿಲ್ಲ ಕಣೆ. ಅದ್ಯಾವ ಗಳಿಗೆಯಲ್ಲಿ ನಾನು ಉರು ಬಿಟ್ಟು ಬಂದೆನೋ ಎಂದು ಮಮ್ಮಲ ಮರುಗುತ್ತಿದೆ ಎನ್ನ ಮನ. ನಿನ್ನೊಂದಿಗೆ ಕಳೆದ ಆ ಕೆಲವೇ ದಿನಗಳನ್ನು ನಾ ಮರೆಯಲು ಸಾಧ್ಯವೇ ಇಲ್ಲ. ಹುರಕಡ್ಲಿ ಅಜ್ಜನ ಆವರಣದಲ್ಲಿ ಮನಸ್ಸಿಲ್ಲದೆ ಆಲಿಸಿದ "ಶರಣರು ಕಂಡ ಶಿವ". ನಿನಗ ನೆನಪೈತಿ ...........? ಅವತ್ತು ಸಂಜಿಮುಂದ ಬಸ್ಸಿಗೆ ಎಳೆ ಆಗಿತ್ತು..........., ನಾನು ಮಾರಾಟ ಕಾಲ್ನಿಯಾಗ ದುರ್ಗಾದೇವಿ ಗುಡಿ ಹಂತೆಲಿ ಶುರು ಮಾಡಿದ್ ಕಂಪನಿ ಆಫೀಸಿಂದ ಮನಿಗಿ ಬರುವಾಗ ................ ನಿ ನನ್ನ ಕಿರ್ತನ ಕೇಳಾಕ್ ಕರ್ಕೊಂಡ್ ಹೋಗಿದ್ದೆಲ್ಲ. ನೆನಪ್ ಆಗ್ಲಿಲ್ಲ?
ನಿನಗೆಂಗ್ ನೆನಪ್ ಅಕ್ಕತಿ ನೀವೆಲ್ಲಾ ಪೂರ್ತಿ ಮರ್ತ ಬಿಟ್ಟಿರಿ ಈಗ ನನ್ನ.